ಬ್ಯಾರಿ ಫಿಲಿಪ್
	1899-1949. ಅಮೆರಿಕದ ನಾಟಕಕಾರ. ಐರಿಷ್ ಕುಟುಂಬದಿಂದ ಬಂದವ. ನ್ಯೂಯಾರ್ಕ್‍ನ ರೋಚೆಸ್ಟರ್‍ನಲ್ಲಿ ಜನನ. ಯೇಲ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ, ಕೆಲತಿಂಗಳು (1918) ಲಂಡನ್‍ನಲ್ಲಿ ಅಮೆರಿಕ ದೂತಾವಾಸದಲ್ಲಿ ಸೇವೆಸಲ್ಲಿಸಿದ. 1923ರಿಂದ ಯೂ ಅಂಡ್ ಐ ಎಂಬ ಸಾಮಾಜಿಕ ಪ್ರಹಸನದೊಂದಿಗೆ ವರ್ಷಕ್ಕೆ ಒಂದರಂತೆ ನಾಟಕಗಳನ್ನು ಬರೆಯತೊಡಗಿದ. ಅಲ್ಲದೆ ಇನ್ ಎ ಗಾರ್ಡನ್ (1925), ಪ್ಯಾರಿಸ್ ಬೌಂಡ್ (1927), ಹಾಲಿಡೆ (1928), ದಿ ಫಿಲಡೆಲ್ಫಿಯ ಸ್ಟೋರಿ (1939) ವಿತಾಔಟ್ ಲವ್ (1942); ಪೋಲಿಷ್ ನೆಷನ್ (1948)-ಎಂಬ ಸಾಮಾಜಿಕ ನಾಟಕಗಳನ್ನು ಜಾನ್ ದಿ ಬಾಪ್ಟಿಸ್ಟ್ ನ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಜಾನ್ (1927) ಎಂಬ ಧಾರ್ಮಿಕ ನಾಟಕವನ್ನು ಸಮ್ಮೋಹನ ವಿದ್ಯೆಗೆ ಸಂಬಂಧಿಸಿದ ಹೋಟೆಲ್ ಯೂನಿವರ್ಸ್ (1930) ಎಂಬ ನಾಟಕವನ್ನೂ ದಿ ಜಾಯಸ್ ಸೀಸûನ್ (1930); ಬ್ರೈಟ್ ಸ್ಟಾರ್ (1936); ಹಿಯರ್ ಕಮ್ ದಿ ಕ್ಲೌನ್ಸ್ (1938); ಹ್ವೈಟ್ ವಿಂಗ್ಸ್ (1926) ಎಂಬ ವಿನೋದ ನಾಟಕಗಳನ್ನು ಬರೆದ.
(ಎಂ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ